Index   ವಚನ - 285    Search  
 
ಹೃದಯ ಮಧ್ಯದಲೊಂದು ಜ್ಯೋತಿಯ ಮನೆ ಹುಟ್ಟಿತ್ತು. ಆ ಜ್ಯೋತಿಯ ಮಧ್ಯದಲ್ಲಿ ಸ್ಫಟಿಕದ ತನು ಬೆಳಗಿತ್ತು. ಆ ಬೆಳಗಿನ ತನು ಮಧ್ಯದಲ್ಲಿ ಮರುಜವಣಿಯ ಕುಡಿ. ಹೆಸರಿಲ್ಲದ ರೂಪಾಯಿತ್ತು ಬಸವಂಗೆ, ಸಂಗಯ್ಯಾ ನಿಮ್ಮಲ್ಲಿ.