Index   ವಚನ - 47    Search  
 
ಪೂಜೆಯಲ್ಲಿ ಲಕ್ಷಿತವಪ್ಪವರು ಪುಣ್ಯದ ಆಗಿಂಗೆ ಒಡಲು. ದಾಸೋಹವೆಂಬ ಸೋಹವನರಿದಲ್ಲಿ ಚತುರ್ವಿಧಫಲಪದದಾಸೆಗೆ ಒಡಲು. ಇಂತೀ ಉಭಯದ ಪ್ರೀತಿಯನರಿತು ತೋರಿದ ತೋರಿಕೆ ಬಂದಂತೆ, ಅವನಾರೈದು ಗುರುವಿಂಗೆ ತನು ಹೋಯಿತ್ತು ಲಿಂಗಕ್ಕೆ ಮನ ಹೋಯಿತ್ತು ಜಂಗಮಕ್ಕೆ ಧನ ಹೋಯಿತ್ತು. ಇಂತೀ ಎಲ್ಲ ಲಕ್ಷ್ಯದಲ್ಲಿ ಲಕ್ಷಿಸಿ, ನೀವು ಕೈಲಾಸಕ್ಕೆ ಹೋದೆಹೆನೆಂಬ ಕಲ್ಲೆದೆಗೆ ನಾನಂಜುವೆ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ.