ಅಂತ್ಯಜನಾಗಲಿ, ಅಗ್ರಜನಾಗಲಿ ಮೂರ್ಖನಾಗಲಿ, ಪಂಡಿತನಾಗಲಿ
ಜಪಿಸುವುದು ಶ್ರೀ ಪಂಚಾಕ್ಷರಿಯ.
ಆ ಜಪದಿಂದ ರುದ್ರನಪ್ಪುದು ತಪ್ಪದು. ಅದೆಂತೆಂದಡೆ:ಲೈಂಗೇ
'ಅಂತ್ಯಜೋಪ್ಯಗ್ರಜೋ ವಾಪಿ ಮೂರ್ಖೋ ವಾ ಪಂಡಿತೋಪಿ ವಾ
ಪಂಚಾಕ್ಷರೀಂ ಜಪೇನ್ನಿತ್ಯಂ ಸ ರುದ್ರೋ ನಾತ್ರ ಸಂಶಯಃ
ಇಂತೆಂದುದಾಗಿ,
ಇದು ಸತ್ಯ, ಇದು ಸತ್ಯ, ಇದು ಸತ್ಯ ಜಪಿಸುವುದು,
ಶಪಥವ ಮಾಡಿದೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music
Courtesy:
Transliteration
Antyajanāgali, agrajanāgali mūrkhanāgali, paṇḍitanāgali
japisuvudu śrī pan̄cākṣariya.
Ā japadinda rudranappudu tappadu. Adentendaḍe:Laiṅgē
'antyajōpyagrajō vāpi mūrkhō vā paṇḍitōpi vā
pan̄cākṣarīṁ japēnnityaṁ sa rudrō nātra sanśayaḥ
intendudāgi,
idu satya, idu satya, idu satya japisuvudu,
śapathava māḍide, uriliṅgapeddipriya viśvēśvarā.