Index   ವಚನ - 26    Search  
 
ಅಯ್ಯಾ, ಹರಿಹರ ಒಂದೆಂಬರು ಹರಿ ಕರ್ರಗೆ, ಬ್ರಹ್ಮ ಕೆಂಪಗೆ, ಈಶ್ವರನ ಧವಳವರ್ಣ, ಅಲ್ಲಿ ಒಂದನೆಂಬೆನೆ? ಒಂದಲ್ಲ, ಇಟ್ಟುದರಳಗೆ ಒಂದೆಂಬೆನೆ? ಹರಿಗೆ ಮಟ್ಟಿ, ಬ್ರಹ್ಮಗೆ ಚಂದ್ರ, ೀಶ್ವರಂಗೆ ವಿಭೂತಿ, ಅಲ್ಲಿ ಒಂದನೆಂಬೆನೆ? ಹರಿಗೆ ತೋಳಸಿ, ಬ್ರಹ್ಮಗೆ ಮಂಚ್ಯಪತ್ರೆ, ಈಶ್ವರಂಗ ೆಬಿಲ್ವಪತ್ರೆ, ಅಲ್ಲ ಿಒಂದನೆಂಬೆನೆ? ಒಂದಲ್ಲ, ವಾಹನದಲ್ಲಿ ಒಂದೆನೆಂಬೆನೆ? ಹರಿ ಗೆಗರುಡ, ಬ್ರಹ್ಮಗೆ ಹಂಸೆ, ಈಶ ್ವರಂಗೆ ವ್ರೂಷಭ ಅಲ್ಲಿ ಒಂದೆಂಬೆನೆ? ಒಂದಲ್ಲ. ಸ್ತ್ರೀಯರೊಳಗೆಂದೆಂಬೆನೆ? ಹರಿಗೆ ಲಕ್ಷಮಿ, ಬ್ರಹ್ಮಗೆ ಸರಸ್ವತಿ, ಈಶ್ವರಂಗೆ ಪಾರ್ವತಾದೇವಿ, ಅಲ್ಲಿ ಒಂದೆಂಬನೆ? ಒಂದಲ್ಲ. ಹಾಸ್ಯದೋಳಗೊಂದೆಂಬೆನೆ? ಹರಿಗೆ ಹತ್ತುಭಾವ, ಬ್ರಹ್ಮಂಗತನಂತ ಪ್ರಳಯ, ಈಶ್ವರಂಗೆ ನಿತ್ಯ ಮ್ರುತ್ಯುಂಜಯ, ಅದೆಂತೆಂದೋಡೆ: :ಅಸಂಖ್ಯಾ ಕೋಟಿ ಬ್ರಹ್ಮನಾಂ/ ವಿಷ್ಣು ಕೋಟಿಗತಂ ತಥಾ ಗಂಗೆವಾಳ ಸಮಾರುದ್ರಂ/ ಕಿಂಚಿಧ್ಯಾನ ಮಹೇಶ್ವರಃ’ ಅಲ್ಲಿಒಂದೆಬೆನೆ? ಒಂದಲ್ಲ ಿಂತೀ ಹರಿಹರ ೊಂದೆಂಬ ಮರುಳ ವಿಪ್ರರ ಬಾಯಲ್ಲಿ ದಳದಳನೆ ಬಾಲ್ಪುಳುಗಳು ಸುರಿಯವೆ ಉರಿಲಿಂಗಪೆದ್ದಿಪ್ರಿಯವಿಶ್ವೇಶ್ವರಾ.