ಅಯ್ಯಾ ಶಿವಷಡಾಕ್ಷರಮಂತ್ರವೆ
ಸರ್ವಮಂತ್ರವೆಲ್ಲವಕ್ಕೆ ಮಾತೃಸ್ಥಾನ.
ಅಯ್ಯಾ ಶಿವಷಡಾಕ್ಷರಮಂತ್ರವೆ
ಸರ್ವವೆಲ್ಲವಕ್ಕೆ ಉತ್ಪತ್ತಿ ಸ್ಥಿತಿ ಲಯ ಸ್ಥಾನ.
ಅಯ್ಯಾ ಶಿವಷಡಾಕ್ಷರಮಂತ್ರವೆ
ಸರ್ವಕಾರಣವೆಲ್ಲವಕ್ಕೆ ಮೂಲ.
ಇದು ಕಾರಣ ಶಿವಷಡಾಕ್ಷರಮಂತ್ರವ
ಸ್ಮರಿಸುವ ಸದ್ಭಕ್ತನೆ ವೇದಾತೀತನು.
ಆ ಸದ್ಭಕ್ತನೆ ಶಾಸ್ತ್ರವಾನ್,
ಆ ಮಹಾಮಹಿಮನೆ ಪುರಾಣಿಕನು.
ಆ ಮಹಾಮಹಿಮನೆ ಆಗಮಿಕನು.
ಆ ಮಹಾಮಹಿಮನೆ ಸರ್ವಜ್ಞಾನಿಯಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.