Index   ವಚನ - 43    Search  
 
ಆದಿಲಿಂಗ ಅನಾದಿಶರಣನೆಂಬುದು ತನ್ನಿಂದ ತಾನಾಯಿತ್ತು ಕೇಳಿರಣ್ಣಾ. ಆದಿ ಕಾಯ, ಅನಾದಿ ಪ್ರಾಣ, ಈ ಉಭಯದ ಭೇದವ ತಿಳಿದು ವಿಚಾರಿಸಿ ನೋಡಿರಣ್ಣಾ. ಅಂತು ಅನಾದಿಯ ಪ್ರಸಾದ ಆದಿಗೆ ಸಲುವುದು. ಅದೆಂತೆಂದಡೆ, ಅನಾದಿಜಂಗಮಶ್ಚೈವ ಆದಿಲಿಂಗಸ್ಥಲಂ ಭವೇತ್| ಅನಾದೇಶ್ಚ ವಿರೋಧೇನ ತದುಚ್ಛಿಷ್ಟಂ ತು ಕಿಲ್ಬಿಷಂ ಇಂತೆಂದುದಾಗಿ, ಪ್ರಾಣಪ್ರಸಾದವಿರೋಧವಾಗಿ ಪಿಂಡಪ್ರಸಾದವ ಕೊಂಡಡೆ ಕೊಂಡುದು ಕಿಲ್ಬಿಷ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.