Index   ವಚನ - 45    Search  
 
ಆಯುಷ್ಯಭಾಷೆಯನು ಲಿಂಗವೆ ಕೊಡುವನಯ್ಯಾ. ಇನ್ನಾರಿಗೂ ಕಕ್ಕುಲತೆ ಬಡದಿರಿ. ಲಿಂಗವು ಕೊಡುವ ಕಂಡಾ! ಆದಡಿನ್ನು ಮತ್ತಾರಿಂಗೂ ಕಕ್ಕುಲತೆಯ ಬಡದಿರಿ. ಲಿಂಗವಂತಂಗೆ ಕಕ್ಕುಲತೆಯಾದಡೆ ಲಿಂಗವಂತನೆನಿಸನು. ಕಕ್ಕುಲತೆಯಲ್ಲಿ ಅನ್ಯರನಾಸೆಗೈದಡೆ ಲಿಂಗವು ರಕ್ಷಿಸನು, ಶಿವನಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.