Index   ವಚನ - 48    Search  
 
ಆಸರಿನ ಭಕ್ತಜಡರುಗಳು ಬೇಸತ್ತು ಜಂಗಮಕ್ಕೆರಗಿ ಪಾದಪ್ರಕ್ಷಾಲನೆಯಂ ಮಾಡಿ ಪಾದೋದಕವ ಧರಿಸುತ್ತಿರ್ಪರು. ಆವುದು ಕ್ರಮವೆಂದರಿಯರು. ಅರಿದಡೆ ಪಾದೋದಕ, ಅರಿಯದಿರ್ದಡೆ ಬರಿಯ ನೀರೆಂದರಿಯರು. ಅರಿದರಿದು ಬರುದೊರೆವೋದರು ಮಾನವರೆಲ್ಲ. ಅರಿವು ಸಾಮಾನ್ಯವೇ? ಶಿವಾತ್ಮಕಪದದ್ವಂದ್ವಪ್ರಕ್ಷಾಲನೆ ಜಲಂ ನರಾಃ' ಯೇ ಪಿಬಂತಿ ಪುನಸ್ತನ್ಯಂ ನ ಪಿಬಂತಿ ಕದಾಚನ' ಇಂತೆಂಬ ವಚನವ ಕೇಳಿ ನಂಬುವುದು. ನಂಬದಿರ್ದಡೆ, ಮುಂದೆ ಭವಘೋರ ನರಕ ತಪ್ಪದು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.