Index   ವಚನ - 49    Search  
 
ಆಶೆಯುಳ್ಳನ್ನಬರ ಆಶ್ರಯಿಸುವ ಆಶ್ರಯವು ದಾಸಿಯಿಂದ ಕರಕಷ್ಟ ಕಾಣಿರೊ! ಆಸೆಯೆ ದಾಸಿತ್ವ ಕಾಣಿರೊ, ಅಯ್ಯಾ! ಆ ನಿರಾಶೆಯೆ ಈಶ ಪದ, ಕಾಣಿರಣ್ಣಾ! ದಾಸತ್ವದ ಈಶತ್ವದ ಅನುವನು ವಿಚಾರಿಸಿ, ಆಶೆ ಅಡಗಿದಡೆ ಅದೆ ಈಶ ಪದ, ತಪ್ಪದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.