Index   ವಚನ - 52    Search  
 
ಇಂದ್ರಿಯಂಗಳಿಗೆ ಪ್ರೇಮದಿಂದಾಡಿ ನುಡಿದು, ಅವರಿಚ್ಚೆಯ ಬಳಿಸಲುವ ಇಚ್ಚೈಕಪುರುಷರು ಅನೇಕರು. ಆ ಇಂದ್ರಿಯಂಗಳ ನಂದಿಸಿ, ಲಿಂಗೇಂದ್ರಿಯಂಗಳ ಮಾಡಿ, ಪಂಚೇಂದ್ರಿಯಂಗಳಲ್ಲಿ ಪಂಚಲಿಂಗಪ್ರತಿಷ್ಠೆಯ ಮಾಡಿ, ಪಂಚಪ್ರೇಮದಿಂದ ನುಡಿದು, ಶಿವಜ್ಞಾನಪಥವ ಹತ್ತಿಸುವ ಪುರುಷರದೇ ಮಾರ್ಗ. ಅವರ ಕಂಡಡೆ ನೀನೆಂಬೆನು ಕಾಣಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.