Index   ವಚನ - 51    Search  
 
ಇಂತಪ್ಪ ಶಿವಯೋಗಿಯಂ ಇಂದ್ರಿಯಂಗಳು ಕೂಡಿಯಾಡುವ ಮಾನವನು ಬಹು ಚೆಚ್ಚಿಯನುಳ್ಳ ವಾನರನಂ ಬಂಧಿಸಿ ತನ್ನಿಚ್ಛೆಯಲಿ ಆಡಿಸುವ ಯಕ್ಷನ ಹಾಂಗೆ ಉಲಾಯೋಗ ಸ್ಥಾನಂಗಳಲ್ಲಿ ಬ್ರಹ್ಮಾನುಸಂಧಾನದಲ್ಲಿಯುಂ ಎಲ್ಲಾ ಪದಾರ್ಥಂಗಳು ತಟ್ಟು ಮುಟ್ಟಂಗಳಲ್ಲಿಯವುಬಹುದೆ? ಸಂಸಾರ ಪ್ರಪಂಚವ ಪರಿಹರಿಸುವೆ ಪರಮಾರ್ಥವ ಕಾಣಬಹುದೆ? ತೆರೆಯಲ್ಲದೆ ಜಲದ ವರ್ತನೆ ನಡೆವುದೆ? ಆ ಜಲವನು ಪ್ರಯೋಗಿಸುವಂತೆ ಪರವನು ಪ್ರಯೋಗಿಸುವುದಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.