`ಇಷ್ಟಂ ಪ್ರಾಣಸ್ತಥಾ ಭಾವಸ್ತ್ರಿಧಾ ಏಕಂ? ಎಂದುದಾಗಿ,
ಶ್ರೀಗುರು ಮಾಡಿದ ಕಾರಣ, ಲಿಂಗವೇ ಪ್ರಾಣ, ಪ್ರಾಣವೇ ಲಿಂಗ.
ಅಂತರಂಗ ಬಹಿರಂಗ ಸ್ವಾಯತವಾಗಿ
ಧರಿಸಿಕೊಂಡಿಪ್ಪ ಕಾಯವು ಲಿಂಗದ ಕಾಯವು.
ಪ್ರಾಣ ಲಿಂಗವಾದ ಬಳಿಕ ಕಾಯ ಬೇರೆ ಇನ್ನಾರದಯ್ಯಾ?
ಕಾಯ ಲಿಂಗಕಾಯ, ಆ ಕಾಯ ಲಿಂಗವು
ಇದು ಕಾರಣ, ಭಾವಭೇದವಿಲ್ಲ.
ಲಿಂಗ ಕಾಯ ಒಂದೆಯಾಗಿ ಸರ್ವಾಂಗಲಿಂಗ
ಕಾಯಕ್ರೀ ಎಲ್ಲವೂ ಲಿಂಗಕ್ರೀ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.