Index   ವಚನ - 90    Search  
 
ಕಕ್ಷೆ ಕರಸ್ಥಲ ಉತ್ತಮಾಂಗ ಉರಸ್ಥಲ ಮೊದಲಾದ ಸ್ಥಾನಂಗಳಂ ಶುದ್ಧವ ಮಾಡಿ, ``ಯಾ ತೇ ರುದ್ರ ಶಿವಾತನೂರಘೋರಾ[s] ಪಾಪಕಾಶಿನೀ ಎಂಬ ಶಿವಲಿಂಗಮೂರ್ತಿಯಂ ಸ್ಥಾಪಿಸಿ, ತತ್‍ಶಿಷ್ಯನ ಶರೀರವೆ ನಡೆದೇವಾಲಯವೆಂಬಂತೆ ಶ್ರೀಗುರು ಪಾವನವ ಮಾಡಿ ತೋರಿದನಾಗಿ ಅಂಗದ ಮೇಲೆ ಲಿಂಗವುಳ್ಳವರ ಕಂಡು ಮರಳಿ ಮಾನವರೆಂದಡೆ ನಾಯಕನರಕ ತಪ್ಪದಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.