ಅಂಗದ ಮೇಲೆ ಲಿಂಗವರತು,
ಲಿಂಗದ ಮೇಲೆ ಅಂಗವರತು,
ಭಾವತುಂಬಿ ಪರಿಣಾಮವರತು,
ನಾಮವಿಲ್ಲದ ದೇವರಿಗೆ
ನೇಮವೆಲ್ಲಿಯದೊ ಗುಹೇಶ್ವರಾ.
Transliteration Aṅgada mēle liṅgavaratu,
liṅgada mēle aṅgavaratu,
bhāvatumbi pariṇāmavaratu,
nāmavillada dēvarige
nēmavelliyado guhēśvarā.
Hindi Translation अंग में लिंग छिपा है , लिंग में अंग छिपा है ,
भाव में परिणाम छिपा है ,
नाम रहित देव को नेम कहाँ है गुहेश्वरा?
Translated by: Eswara Sharma M and Govindarao B N
Tamil Translation உடலில்லிங்கம் அடங்கிட இலிங்கத்தில் உடலடங்கிட
உணர்வு நிறைந்து பேரின்பம் உண்டாயிற்று
பெயரற்ற இறைவனுக்கு நியம மெதற்கோ குஹேசுவரனே?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂಗ = ದೇಹ; ಅಂಗ = ಸೂಕ್ಷ್ಮದೇಹ; ಮನಸ್ಸು; ಅರತು = ಕಾಣದಾಗಿ; ದೇವ = ಲಿಂಗದೇವನೊಂದಿಗೆ ಒಂದಾದ ಶರಣ; ನಾಮ = ಲಿಂಗಭಿನ್ನವಾದ ಅಸ್ತಿತ್ವ; ನೇಮ = ಯೋಗಸಾಧನೆ; ಪರಿಣಾಮ = ಜೀವ-ಶಿವ ಸಮರತಿಯ ಆನಂದ; ಭಾವ = ಶಿವೋಹಂ ಭಾವ, ಪ್ರಜ್ಞೆ; ಲಿಂಗ = ಪ್ರಾಣಲಿಂಗ;
Written by: Sri Siddeswara Swamiji, Vijayapura