Index   ವಚನ - 124    Search  
 
ಜಾತವೇದಸ್ಸಿನಲ್ಲಿ ಶೋಧಿಸಿ ಪುಟವಿಟ್ಟ ಬೂದಿಯಂತಾದೆನಯ್ಯಾ ನಿಮ್ಮನಾರಾಧಿಸಿ. ಅದೆಂತೆಂದಡೆ: ʼಜ್ಞಾನಾಗ್ನಿಸ್ಸರ್ವಕರ್ಮಾಣಿ ಭಸ್ಮಸಾತ್ಕುರುತೇʼ ಎಂದುದಾಗಿ ಕಾದ ಲೋಹದ ಮೇಲೆ ಉದಕವನೆರೆದಂತಾದೆನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.