Index   ವಚನ - 172    Search  
 
ಪರುಷದ ಗೃಹದೊಳಗಿದ್ದು, ತಿರಿವನೆ ಮನೆ ಮನೆಯ? ತೊರೆಯೊಳಗಿದ್ದವನು, ತೃಷೆಯಾಗಲರಸುವನೆ ಕೆರೆಯುದಕವ? ಮಂಗಳಲಿಂಗ ಅಂಗದ ಮೇಲೆ ಇದ್ದು, ಅನ್ಯಲಿಂಗಗಳ ನೆನೆವನೆ ನಿಮ್ಮ ಭಕ್ತನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ?