Index   ವಚನ - 193    Search  
 
ಬೆಡಗಿನಲಿಪ್ಪ ಅಗ್ನಿ ಮೈದೋರದಿದ್ದಲ್ಲಿ ಆಕಾರ ನಾಸ್ತಿಯಾಗದು. ಇಷ್ಟಲಿಂಗಕ್ಕೆ ಕಾಯದ ಕೈ ಮುಟ್ಟಿ ಮಾಡುವ ಅಷ್ಟವಿಧಾರ್ಚನೆ ಷೋಡಶೋಪಚರ್ಯದಿಂದ ಬೆಡಗಿನಲಿಪ್ಪ ಜ್ಞಾನಾಗ್ನಿ ಮೈದೋರದಲ್ಲಿ ಆಕಾರನಾಸ್ತಿಯಾಯಿತ್ತು. ಅಂಗದ ಮೇಲಣ ಲಿಂಗದ ಜವನಿಕೆ ಬಗೆದಗೆದಡೆ ಕಾಯದ ಪರಿ ನಷ್ಟ, ಜ್ಞಾನಾಗ್ನಿಯಿಂದ ಪ್ರಾಣನ ಭೋಗ ನಷ್ಟ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ ಪೂಜಿಸುವ ಶರಣನ ಮರ್ತ್ಯಜನೆಂದಡೆ ನಾಯಕ ನರಕ.