Index   ವಚನ - 201    Search  
 
ಭಕ್ತಂಗಾಗಲಿ ಜಂಗಮಕ್ಕಾಗಲಿ ಸಹಪಂತಿ ಶಿವಭೋಜನದಲ್ಲಿ ಮನವೆರಕದಿಂದ ಸಂಪ್ರೀತಿಯಿಂದ ಪಾದೋದಕ ಪ್ರಸಾದವಿಲ್ಲದೆ ಭೋಜನವ ಮಾಡಲು ವಿಪ್ರಭೋಜನವಾಯಿತ್ತಾಗಿ, [ಕೆ]ಟ್ಟ ಸೂಕರನ ಬಸುರಲಿ ಬಪ್ಪುದು ತಪ್ಪದು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.