Index   ವಚನ - 202    Search  
 
ಭಕ್ತನು ರುದ್ರಗಣಂಗಳ ಮಠಕ್ಕೆ ಬಂದಡೆ ಭೃತ್ಯನಾಗಿರಬೇಕು. ಕರ್ತನಾಗಿ ಕಾಲ ತೊಳೆಯಿಸಿಕೊಂಡಡೆ ಹಿಂದೆ ಮಾಡಿದ ಭಕ್ತಿ ಹಾನಿಯಪ್ಪುದು. ಲಕ್ಷಗಾವುದ ಹೋಗಿಯಾದಡೂ ಭಕ್ತನು ಗಣಂಗಳ ಕಾಂಬುದು ಸದಾಚಾರ. ಅಲ್ಲೇ ಕೂಡಿ ದಾಸೋಹವ ಮಾಡಿ ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನವ ಕೊಟ್ಟು ಅಹಂಕಾರವಳಿದಿಹ ಪುರಾತನರು ಮೆಟ್ಟುವ ಪಾದರಕ್ಷೆಗಳ ಮಸ್ತಕದ ಮೇಲಿರಿಸಿಕೊಂಡು, ಕೃತಾರ್ಥನಪ್ಪದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.