ಮಣ್ಣ ಬೆಲ್ಲವ ಮಾಡಿ, ಮಗುವಿನ ಕೈಯಲ್ಲಿ ಕೊಟ್ಟು,
ಊರ ತಿರುಗುವ ತುಡುಗುಣಿಯಂತೆ.
ಪ್ರಾಣಲಿಂಗವನರುಹುವ
ಜ್ಞಾನಗುರುವಿನ ಕೈಯ ದೀಕ್ಷೆಯ ಪಡೆಯಲರಿಯದೆ,
ಇಷ್ಟಲಿಂಗವನೊಬ್ಬ ಭ್ರಷ್ಟನ ಕೈಯಲೀಸಿಕೊಂಡು,
ಅಲ್ಲಿ ಭಜಿಸಿ ಭ್ರಾಂತುಗೊಂಬ
ಮಿಟ್ಟಿಯ ಭಂಡರನೇನೆಂಬೆ ಹೇಳಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music
Courtesy:
Transliteration
Maṇṇa bellava māḍi, maguvina kaiyalli koṭṭu,
ūra tiruguva tuḍuguṇiyante.
Prāṇaliṅgavanaruhuva
jñānaguruvina kaiya dīkṣeya paḍeyalariyade,
iṣṭaliṅgavanobba bhraṣṭana kaiyalīsikoṇḍu,
alli bhajisi bhrāntugomba
miṭṭiya bhaṇḍaranēnembe hēḷā
uriliṅgapeddipriya viśvēśvarā.