Index   ವಚನ - 209    Search  
 
ಮಜ್ಜನಕ್ಕೆರೆವ ಶರಣರ ಮಹಿಮೆಯನೇನೆಂಬೆನು! ಆವ ಪದಾರ್ಥವೇನಾದಡೆ ಲಿಂಗಕ್ಕೆ ಬಂದಲ್ಲದೊಲ್ಲನು, ಲಿಂಗಾನುಗ್ರಹದಿ ಅನಿಮಿಷನಾಗಿಪ್ಪ ಮಹಿಮನು, ನಾಲ್ಕು ವೇದ ಹದಿನಾರು ಶಾಸ್ತ್ರಕ್ಕೆ ಅಗಮ್ಯ ಅಗೋಚರನು, ಶರಣನು ಸಾರಾಯಸಂಪನ್ನನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.