Index   ವಚನ - 213    Search  
 
ಮನ ಮುಟ್ಟದು, ಬುದ್ಧಿ ಒಂದಾಗದು, ಚಿತ್ತವಿಡಿಯದು, ಅಹಂಕಾರವನುಭವಿಸದು, ಸ್ನೇಹ ಪರಿಣಾಮಿಸದು, ಭಕುತಿ ಎಂತೊ, ಮಾಟವೆಂತೊ, ಕೂಟವೆಂತೊ? ನಿಮ್ಮ ಭಕ್ತಿ ಬಯಲನಪ್ಪುವಂತೆ, ಸಮುದ್ರವನೀಸಾಡುವಂತೆ ಪೂರೈಸದು. ಭಕ್ತ್ಯಂಗನೆಯ ರತಿಸುಖವಿಲ್ಲ, ಮೇಲೆ ಫಲಭೋಗವೆಂತೂ ಇಲ್ಲ. ಅಂತಃಕರಣವೇಕೀಭವಿಸಿ, ಸಮರಸದಲ್ಲಿ ನಿಂದ ಸ್ನೇಹದ ಮಾಟವೆ ಶಿವನ ಕೂಟ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನಲ್ಲಿ ಇದೆ ಭಕ್ತಿರತಿ.