Index   ವಚನ - 228    Search  
 
ರುದ್ರಪಿಂಡದಲ್ಲಿ ಉತ್ಪತ್ತಿ ರುದ್ರವಾಹನನ ಮುಖದಲ್ಲಿ ಸ್ತುತಿ, ನಂದಿಮುಖದಿಂದ ಶುಚಿ ಪಂಚಶಿಖಿ ಉದ್ಧೂಳಿತ ಅಗ್ನಿಕಾರ್ಯನೆವದಿಂದ ವಿಭೂತಿಯ ಧರಿಸಿದಿರಿ, ಇದ್ದಿದ್ದೇನ ನೆನೆದಿರಿ. ಎಡೆಯಂತರದಲ್ಲಿ ಮಲಿನವ ಧರಿಸಿ ಹೆಡ್ಡರಾದಿರಿ, ಅರಿದು ಬರಿದೆ ಬರಿದೊರೆವೋದಿರಿ, ಶ್ವಾನಜ್ಞಾನಿಗಳಾದಿರಿ, ಕೆಟ್ಟಿರಯ್ಯೋ ದ್ವಿಜರು. ತದ್ಧಿನಂಗಳ ಮಾಡುವಲ್ಲಿ ಪಿತೃಗಳನ್ನುದ್ಧರಿಸುವಲ್ಲಿ `ಶ್ರೀ ರುದ್ರಪಾದೇ ದತ್ತಮಸ್ತು' ಎಂಬಿರಿ. `ಏಕ ಏವ ರುದ್ರಃ' ಎಂದು ಅಧ್ಯಾಯಂಗಳಲ್ಲಿ ಹೇಳುವಿರಿ ನಿಮಗಿಂದ ನಾವು ಬುದ್ಧಿವಂತರೇ? ದಧೀಚಿ ಗೌತಮಾದಿಗಳ ಶಾಪವ ಹೊತ್ತಿರಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.