Index   ವಚನ - 229    Search  
 
ಲಘು ಗುರುವಪ್ಪನೆ? ಗುರು ಲಘುವಪ್ಪನೆ? ಆಗದಾಗದು. ಗುರು ಗುರುವೆ, ಲಘು ಲಘುವೆ. ಶ್ರೀಗುರು ಲಘುವರ್ತನದಲ್ಲಿ ವರ್ತಿಸಿದಡೆ ಆಗದು ಆಚಾರ. ಶ್ರೀಗುರು ಲಿಂಗಜಂಗಮಪ್ರಸಾದವನು ತಾನೆ ಲಘುಮಾಡಿ ಲಘುವಾದನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.