Index   ವಚನ - 232    Search  
 
ಲಿಂಗದ ಮರ್ಮವನರಿವುದರಿದು, ಲಿಂಗದ ಸಂಜ್ಞೆಯ[ನ]ರಿವುದರಿದು, ಲಿಂಗವಂತಹದಿಂತಹದೆಂದರಿವುದರಿದು ನೋಡಾ. ಲಿಂಗದಲ್ಲಿಯೇ ಆಗಮವಯ್ಯ, ಭೂಮಿಯೇ ಪೀಠಿಕೆ, ಆಕಾಶವೇ ಲಿಂಗವೆಂದರಿದಾತನು ಲಿಂಗವನರಿದವನಲ್ಲ. ಲಿಂಗದಲ್ಲಿಯೇ ಆಗಮವಯ್ಯ, ಲಿಂಗದಾದಿ ಬ್ರಹ್ಮ, ಮಧ್ಯ ವಿಷ್ಣು, ಅಂತ್ಯ ರುದ್ರ ಇಂತು ತ್ರೈಲಿಂಗವೆಂದರಿದಾತನು ಲಿಂಗವನರಿದವನಲ್ಲ. ಲಿಂಗದಲ್ಲಿಯೇ ಆಗಮವಯ್ಯಾ, `ಲಿಂಗಮಧ್ಯೇ ಜಗತ್ಸರ್ವಂʼ ಎಂಬ ಭಾವಭರಿತಲಿಂಗ `ಬ್ರಹ್ಮವಿಷ್ಣ್ವಾದಿದೇವನಾಮಪ್ಯಗೋಚರಂ' ಎಂದು, ಮಾಹೇಶ್ವರಜ್ಯೋತಿರಿದಮಾಪಾತಾಲೇ ವ್ಯವಸ್ಥಿತಂ ಅತೀತಂ ಸತ್ಯಲೋಕಾಧೀನನಂತಂ ದಿವ್ಯಮೀಶ್ವರಂ' ಇಂತಾದನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು ಎಂದರಿದ ಶರಣಂಗೆ ಸುಲಭ, ಮಿಕ್ಕಿದವರ್ಗೆ ಅಸುಲಭ.