Index   ವಚನ - 231    Search  
 
ಲಿಂಗದಲ್ಲಿ ಮನ ಲೀಯವಾಗಿ, ಜಂಗಮದಲ್ಲಿ ಧನ ಲೀಯವಾಗಿ, ಸದ್ಗುರುಲಿಂಗದಲ್ಲಿ ತನು ಲೀಯವಾಗಿ ಹೊಗಲು ಭಕ್ತ ಲಿಂಗದೊಳಗೆ, ಲಿಂಗ ಭಕ್ತನೊಳಗೆ. ವಂಚನೆಯಿಲ್ಲದೆ ದಾಸೋಹ ಕೇವಲ ಮುಕ್ತಿ, ಇದು ಸತ್ಯ ನಿತ್ಯ ಶಿವ ಬಲ್ಲನಯ್ಯಾ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.