ವಟಬೀಜವು ವಟವೃಕ್ಷಕೋಟಿಯನೊಳಕೊಂಡಿಪ್ಪಂತೆ,
ಸಟೆಯಿಂದಲಾದಜಾಂಡಕೋಟಿಯನೊಳಕೊಂಡಿಹ ಲಿಂಗವೆ,
`ಅಯಂ ಮೇ ಹಸ್ತೋ ಭಗವಾನ್' ಎಂದೆನಿಸುವ ಲಿಂಗವೆ,
`ಚಕಿತಮಭಿದತ್ತೇ ಶ್ರುತಿರಪಿ' ಎಂದೆನಿಸುವ ಲಿಂಗವೆ,
ಎನ್ನ ಕರಸ್ಥಕ್ಕೆ ಬಂದು ಸೂಕ್ಷ್ಮವಾದೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music
Courtesy:
Transliteration
Vaṭabījavu vaṭavr̥kṣakōṭiyanoḷakoṇḍippante,
saṭeyindalādajāṇḍakōṭiyanoḷakoṇḍ'̔iha liṅgave,
`ayaṁ mē hastō bhagavān' endenisuva liṅgave,
`cakitamabhidattē śrutirapi' endenisuva liṅgave,
enna karasthakke bandu sūkṣmavāde
uriliṅgapeddipriya viśvēśvarā.