Index   ವಚನ - 327    Search  
 
ಸತ್ಯ ಛಲ ಭಾಷೆಯಿಂ ಸತಿಯಾಗಿರಬಲ್ಲ ಶರಣಂಗೆ ಲಿಂಗವೇ ಪತಿ. ಗಮನಾಗಮನವರ್ಜಿತ, ಅರಿಷಡ್ವರ್ಗ ವರ್ಜಿತವ ಮಾಡಿ, ಮಾಟದೊಳು ಬಹುಭಾಷಿತನಲ್ಲಾಗಿ ಸುಬುದ್ಧಿ. ಲಿಂಗಪ್ರಾಣಿ ಎನ್ನ ಬಲ್ಲನಾಗಿ ಷಡುರುಚಿ ವಿರೋಧಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.