•  
  •  
  •  
  •  
Index   ವಚನ - 331    Search  
 
ಧರೆಯ ಮೇಲೊಂದು ಅರಿದಪ್ಪ ರತ್ನ ಹುಟ್ಟಿರಲು, ಅದನರಸಲರಸ ಹೋಯಿತ್ತಯ್ಯಾ. ನಡುನೀರೊಳಗೆ ಮುಳುಗಿ, ಆಳವರಿದು ನೋಡಿ, ಕಂಡೆಹೆನೆಂದಡೆ ಕಾಣಬಾರದು. ಧಾರೆವಟ್ಟಲ ಕಳೆದುಕೊಂಡು ನೀರ ಶೋಧಿಸಿ ನೋಡಿದಡೆ ದೂರದಲ್ಲಿ ಕಾಣಬರುತ್ತಿಹುದು ನೋಡಾ. ಸಾರಕ್ಕೆ ಹೋಗಿ ಹಿಡಿದುಕೊಂಡೆನೆಂಬ ಧೀರರೆಲ್ಲರ ಮತಿಯ ಬಗೆಯ ನುಂಗಿತ್ತು ಗುಹೇಶ್ವರಾ.
Transliteration Dhareya mēlondu aridappa ratna huṭṭiralu, adanarasalarasa hōyittayyā. Naḍunīroḷage muḷugi, āḷavaridu nōḍi, kaṇḍ'̔ehenendaḍe kāṇabāradu. Dhārevaṭṭala kaḷedukoṇḍu nīra śōdhisi nōḍidaḍe dūradalli kāṇabaruttihudu nōḍā. Sārakke hōgi hiḍidukoṇḍenemba dhīrarellara matiya bageya nuṅgittu guhēśvarā.
Hindi Translation धरती पर एक अमूल्य रत्न पैदा होने से उसे ढूँढते ढूँढते चला गया। बीच पानी में डूबकर गहराई देखकर, दॆखे कहें तो नहीं दीखता। धारापात्र खोकर पानी शॊधकर देखे तो, दूर में दिखाई पड रहा है देखो ! समीप जाकर पकडे जैसे धीरोंकी मति निगली थी गुहेश्वरा। Translated by: Eswara Sharma M and Govindarao B N
Tamil Translation பூமியின் மீதொரு அரிய இரத்தினம் தோன்றிட அதனை ஆராய்ந்தறிய முயன்றனர். நீரின் நடுவில் மூழ்கி, ஆழத்தையறிந்துணர்ந்து காணவேண்டும் எனின் காணவியலாது நீர் வட்டிலை உறுதியாகப் பிடித்து, நீரை ஆராயின் தொலைவிலே தென்படும் காணாய்! ஆழ்ந்த தியான நிலையில் உணர்ந்தேனெனும் தீரரின் அறிவை மனம் விழுங்கியது குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಕಳೆದುಕೊಳ್ಳು = ಸ್ಥಿರವಾಗಿ ಹಿಡಿದಿಡು; ಧರೆ = ಪಂಚಭೌತಿಕ ದೇಹ; ಧಾರೆವಟ್ಟಲು = ಧಾರಾಪಾತ್ರೆ, ಅದು ತದೇಕತಾನತಾ ರೂಪಧ್ಯಾನವೃತ್ತಿ; ಧೀರ = ಧೀ ಎಂದರೆ ಆತ್ಮಪ್ರಜ್ಞೆ, ಆ ಪ್ರಜ್ಞೆಯಲ್ಲಿ ರಮಿಸುವವನು ಧೀರ; ಆತ್ಮಾನುಭವಿ; ನೀರು = ಮನಸ್ಸು; ಮತಿ = ಸಂಪ್ರಜ್ಞಾತ ಮತಿ; ಸಂಪ್ರಜ್ಞಾನ ವೃತ್ತಿ.; ರತ್ನ = ಆತ್ಮವಸ್ತು; ಸಾರಕ್ಕೆ ಹೋಗು = ಧ್ಯಾನಸ್ಥಿತಿಯನ್ನು ಘನಗೊಳಿಸು; ಹಿಡಿದುಕೊಳ್ಳು = ಆ ಆತ್ಮರತ್ನವನ್ನು ಗ್ರಹಿಸಿಕೊಳ್ಳು; Written by: Sri Siddeswara Swamiji, Vijayapura