Index   ವಚನ - 349    Search  
 
ಸ್ತನಾಮೃತವ ಸೇವಿಸುವ ಶಿಶು ಸಕ್ಕರೆಯನಿಚ್ಛಿಸುವುದೆ? ಪರುಷ ದೊರಕೊಂಡ ಪುರುಷನು ಜರಗ ತೊಳೆಯಲಿಚ್ಛೈಸುವನೇ? ದಾಸೋಹವ ಮಾಡುವ ಭಕ್ತನು ಮುಕ್ತಿಯನಿಚ್ಛೈಸುವನೇ? ಇವರು ಮೂವರಿಗೆಯೂ ಇನ್ನಾವುದೂ ಇಚ್ಛೆಯಿಲ್ಲ. ರುಚಿ ಪದಾರ್ಥವಿದ್ದಂತೆ. ಲಿಂಗಪದವು ಸಹಜಸುಖವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.