Index   ವಚನ - 350    Search  
 
ಸ್ಥಾವರಕ್ಕೆ ಮೊದಲು ವೀರಭಧ್ರ ನಂದಿಕೇಶ್ವರ ದೊಡ್ಡ ದೈವವೆಂಬವರ [ಮುಖವ]ನೋಡಲಾಗದು. ಅದೇನು ಕಾರಣ, ಶ್ರೀಗುರು ಅನುಗ್ರಹ ಮಾಡುವಲ್ಲಿ ನಾಲ್ವರಾಚಾರ್ಯರು ಭಕ್ತಗಣಂಗಳ ಸಂತತಿಯ ಮುಂದಿಟ್ಟುಕೊಂಡು ಪ್ರಾಣವಿಷ್ಟಲಿಂಗವೆಂದು ಕೊಟ್ಟ ಬಳಿಕ ಸ್ತಾವರವ, ಪೂಜಿಲಾಗದು, ನೆನಯಲಾಗದು, ನೋಡಲಾಗದು. ಅದೇನು ಕಾರಣವೆಂದಡೆ: ಗಣಸಾಕ್ಷಿಯಾಗಿ ಇಷ್ಟಲಿಂಗವ ಕೊಟ್ಟರಲ್ಲದೆ, ಅನ್ಯದೈವದ ಕೊಡಲಿಲ್ಲ. ತಮ್ಮ ಬ[ಲು]ಮೆಯಿಂದ ವೀರಭದ್ರ, ನಂದಿಕೇಶ್ವರ, ಮಲ್ಲಿಕಾರ್ಜುನ, ಬಸವಣ್ಣ ದೊಡ್ಡ ದೈವವೆಂದು ಪೂಜಿಸಿದಡೆ ತಮ್ಮ ಗುರು ತಲ್ಪಕನಾದ ಕಾರಣ ಪಂಚಾಚಾರ ಅಷ್ಟಾವರಣ ಇಲ್ಲನಾಗಿ ಇವರ ಮನೆಯ ವೀರಶೈವ ಭಕ್ತರು ಹೊಗಲಾರದು. ಅಥವಾ ಹೊಕ್ಕು ಬಳಕೆಯ ಮಾಡಿದಡೆ ಇಪ್ಪತ್ತೇಂಟು ಕೋಟಿ ನರಕವನನುಭವಿಸಿ ಹೊಲೆಯರ ಮ[ನೆ]ಯ ನಾಯಿಯ ಹೊಟ್ಟೆಯಲ್ಲಿ [ನೊರೆಂಟು ಬಾರಿ] ಬಪ್ಪುದು ತಪ್ಪದು, ಇದು ಕಾರಣ, ಅವರನೊಲ್ಲೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.