ಕಾರ ಮೇಘವೆದ್ದು ಧಾರಾವರ್ತ ಸುರಿವಾಗ,
ಧಾರುಣಿಯೆಲ್ಲವೂ ಮುಳುಗಿತ್ತು ನೋಡಾ!
ಕಾರಿರುಳ ಕಣ್ಣೊಳಗೆ ಸೂರ್ಯರನೇಕರು ಮೂಡಿ
ದಾರಿಯ ಹೊಲಬೆಂಬುದು ಕೆಟ್ಟಿತ್ತು ನೋಡಾ!
ಪೂರಾಯ ಗಾಯದಲ್ಲಿ ಸಾಯೆ ಕೊಂದಲ್ಲದೆ
ಸೂರಿಯರನೇಕರು ಮಡಿಯರು ಗುಹೇಶ್ವರಾ.
Transliteration Kāra mēghaveddu dhārāvarta surivāga,
dhāruṇiyellavū muḷugittu nōḍā!
Kāriruḷa kaṇṇoḷage sūryaranēkaru mūḍi
dāriya holabembudu keṭṭittu nōḍā!
Pūrāya gāyadalli sāye kondallade
sūriyaranēkaru maḍiyaru guhēśvarā.
Hindi Translation काली घटा मूसलघारा होते समय
सारी धरती डूब गयी थी देखो !
अंधेरी रात में आँखों में कई सूरज निकलकर
मार्ग बिगडा था देखो !
बडे घाव को दूर किये बिना
कई सूर्य न मरते गुहेश्वरा।
Translated by: Eswara Sharma M and Govindarao B N
Tamil Translation கார்மேகம் எழும்பி மழைபொழியின்
உலகம் மூழ்கியது காணாய்!
காரிருளின் கண்ணிலே பல சூரியர் தோன்றி
வழி என்பது தவறியது காணாய்!
முற்றிலு மழித்து அகற்றினாலன்றி
பலசூரியர் அழியார் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಕಾರಮೇಘ = ಕಾರ್ಮೋಡ, ಮಹಾಮಾಯೆ; ಕಾರಿರುಳು = ಕಾರ್ಗತ್ತಲೆ, ಅಜ್ಞಾನ; ದಾರಿ = ಶಿವಯೋಗಮಾರ್ಗ, ಜ್ಞಾನಮಾರ್ಗ; ಧಾರಾವರ್ತ = ಧಾರಾವರ್ಷ, ಆಶೆ-ಆಮಿಷಗಳು; ಧಾರುಣಿ = ದೇಹಧಾರಿಯಾದ ಜೀವ; ಸೂರ್ಯರನೇಕರು = ಅನೇಕ ವಿಪರೀತ ಭಾವನೆಗಳು, ಅನಾತ್ಮ ದೇಹಾದಿಗಳೇ ತಾನೆಂಬ ಕಲ್ಪನೆಗಳು;
Written by: Sri Siddeswara Swamiji, Vijayapura