ವಚನ - 341     
 
ತಾನು ಮಿಂದು ಕಾಲ ತೊಳೆದ ಬಳಿಕ ಲಿಂಗಕ್ಕೆ ಮಜ್ಜನಕ್ಕೆರೆವರು. ತಾನು ಲಿಂಗವೊ ಲಿಂಗ ಲಿಂಗವೊ? ಏನು ಲಿಂಗ? ಬಲ್ಲಡೆ ನೀವು ಹೇಳಿರೆ. ಲಿಂಗಸಂಬಂಧವನರಿಯದೆ ಕೆಟ್ಟರು ಗುಹೇಶ್ವರಾ.