ಕಾರ್ಯವನರಿಯರು ಕೊರತೆಯನರಿಯರು.
ವಾಯಕ್ಕೆ ಬಳಲುವರು ತಾವು ಜ್ಞಾನಿಗಳೆಂದು.
ತಾಯಿಯಿಲ್ಲದ ಮೂಲನ ತಲೆವಿಡಿಯಲರಿಯದೆ
ದೇವರಾದೆವೆಂದಡೆ ನಾಚಿದೆನು ಗುಹೇಶ್ವರಾ.
Transliteration Kāryavanariyaru korateyanariyaru.
Vāyakke baḷaluvaru tāvu jñānigaḷendu.
Tāyiyillada mūlana taleviḍiyalariyade
dēvarādevendaḍe nācidenu guhēśvarā.
Hindi Translation न कार्य जानते, कमी न जानते ;
खुद ज्ञानी समझकर व्यर्थ प्रयत्न करते !
बिना माँ के बेटे को न समझे
देव बनगये कहेंतो लज्जित हुआ गुहेश्वरा।
Translated by: Eswara Sharma M and Govindarao B N
Tamil Translation செயல்முறையை யறியார் குறையையுமறியார்
தாங்கள் ஞானிகளென்று பயனின்றி முயற்சிப்பர்
தாயற்ற மகனின் தலையைப் பெறுவதறியாது
இறைவனானேனெனின் நாணுவேன் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಕಾರ್ಯ = ಕರಣೀಯ, ಅವಶ್ಯ ಮಾಡಬೇಕಾದುದು, ; ಕೊರತೆ = ಅಭಾವ, ಅಪೂರ್ಣತೆ; ತಲೆ = ಜ್ಞಾನ; ವಾಯಕ್ಕೆ ಬಳಲು = ವ್ಯರ್ಥ ಪ್ರಯಾಸಪಡು; ಹಿಡಿ = ಪಡೆ;
Written by: Sri Siddeswara Swamiji, Vijayapura