•  
  •  
  •  
  •  
Index   ವಚನ - 343    Search  
 
ನಡೆವರಿಗೊಂದು ಬಟ್ಟೆ, ಮನೆಯ ಒಡೆಯರಿಗೊಂದು ಬಟ್ಟೆ. ನಡೆಯದು ನಡೆಯದು, ಹೋ ನಡೆಗೆಟ್ಟಿತ್ತು ನಿಂದಿತ್ತಲ್ಲಾ! ಗಮನಾಗಮನದ ನುಡಿಯ ಬೆಡಗಿನ ಕೀಲ, ಮಡಗಿದಾತ ಬಲ್ಲ ಗುಹೇಶ್ವರಾ.
Transliteration Naḍevarigondu baṭṭe, maneya oḍeyarigondu baṭṭe. Naḍeyadu naḍeyadu, hō naḍegeṭṭittu nindittallā! Gamanāgamanada nuḍiya beḍagina kīla, maḍagidāta balla guhēśvarā.
Hindi Translation चलनेवाले को एक रास्त, घर के मालिक को एक रास्ता; न होता न होता। राह भूलकर खडा हुआ था ! गमनागमन की बोली का रहस्य तत्व रखनेवाला जानता गुहेश्वरा। Translated by: Eswara Sharma M and Govindarao B N
Tamil Translation நடப்பவர்க்கொரு வழி, வீட்டிலிருப்போர்க்கு ஒரு வழி Translated by: Smt. Kalyani Venkataraman, Chennai
ಶಬ್ದಾರ್ಥಗಳು ಗಮನಾಗಮನ = (ಗಮನ+ಅಗಮನ) ಜಂಗಮ ಮತ್ತು ಭಕ್ತ; ನಡೆವರು = ಚರಿಸುವ ಜಂಗಮರು; ನುಡಿ = ಸಂಬಂಧದ ಸ್ವರೂಪ; ಬೆಡಗಿನ ಕೀಲು = ರಹಸ್ಯ ತತ್ವ; ಮಡಗಿದಾತ = ಇಟ್ಟಾತ; ಮನೆಯೊಡೆಯರು = ಮನೆಯೊಳಗೆ ನೆಲೆಸಿದ ಭಕ್ತರು; Written by: Sri Siddeswara Swamiji, Vijayapura