ಏನೆಂದರಿಯರು ಎಂತೆಂದರಿಯರು,
ಅರಿವನರಿದೆವೆಂಬರು, ಮರಹ ಮರೆದೆವೆಂಬರು.
ಒಂದನರಿದೆನೆಂದಡೆ ಮುಖ ಮೂರಾಯಿತ್ತು.
ಮೂರು ಮುಖವ ಏಕಾಗ್ರಹಕವ ಮಾಡಿದಲ್ಲದೆ
ಶರಣನಲ್ಲ ಗುಹೇಶ್ವರಾ.
Transliteration Ēnendariyaru entendariyaru,
arivanaridevembaru, maraha maredevembaru.
Ondanaridenendaḍe mukha mūrāyittu.
Mūru mukhava ēkāgrahakava māḍidallade
śaraṇanalla guhēśvarā.
Hindi Translation क्या नहीं जानते, कैसा नहीं जानते ;
ज्ञान जाने कह्ते, अज्ञान भूले कहते।
एक जाने कहें तो मुँह तीन हो गये !
तीन मुँहों को एक किये बिना
शरण नहीं गुहेश्वरा।
Translated by: Eswara Sharma M and Govindarao B N
Tamil Translation எது என்று அறியார், எப்படி என்றறியார்
அறிவையறிந்தோமென்பர், மறதியை மறந்தோமென்பர்
ஒன்றினை அறியவிரும்பின் மூன்று முகமாயிற்று
மூன்று முகத்தை ஒன்றாகச் செய்தாலன்றி
சரணனல்லன் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಏಕಗ್ರಾಹಕವ ಮಾಡು = ಒಂದುಗೂಡಿಸು; ಒಂದು = ಎಲ್ಲಿ ವೈವಿಧ್ಯಪೂರ್ಣವಾದ ಎಲ್ಲವು ಮರೆಯಾಗಿಹೋಗುತ್ತದೆಯೋ ಎಲ್ಲಿ ಸ್ಪಷ್ಟವಾದ ತತ್ವಗಳೆಲ್ಲ ಕಾಣದಾಗುತ್ತವೆಯೋ
ಅದು, ಅದ್ವ; ಮುಖ = ಮನೋವೃತ್ತಿ;
Written by: Sri Siddeswara Swamiji, Vijayapura