•  
  •  
  •  
  •  
Index   ವಚನ - 347    Search  
 
ಮಾಮರದೊಳಗೊಂದು ಮಾಯದ ಮಂಜು ಕವಿದಡೆ, ಹೂ ಮಿಡಿ ಫಲಂಗಳು ಉದುರವಿನ್ನೆಂತೊ? ಮಂಜಿನ ರಸವನುಂಡು ಫಲ ನಿಮಿರ್ದು ಬೆಳೆದಡೆ, ಆ ಫಲವ ನಾನು ಮುಟ್ಟೆನು ಕಾಣಾ ಗುಹೇಶ್ವರಾ.
Transliteration Māmaradoḷagondu māyada man̄ju kavidaḍe, hū miḍi phalaṅgaḷu uduravinnento? Man̄jina rasavanuṇḍu phala nimirdu beḷedaḍe, ā phalava nānu muṭṭenu kāṇā guhēśvarā.
Hindi Translation आम के पेड में माया कुहरा लगे तो फूल बतिया फल नहीं गिरते? कुहरा रस पीकर पले अच्छे फल को मैं नहीं छूता देखो गुहेश्वरा। Translated by: Eswara Sharma M and Govindarao B N
Tamil Translation மாமரத்திலொரு மாய மஞ்சு கவிந்தால் மலர், பிஞ்சு, பழங்கள் உதிரவில்லை. எப்படியோ? பனிச்சாற்றை அருந்தி பழங்கள் மிகுதியாக விளையின் அப்பழத்தை நான் தீண்டேன், குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ನಿಮಿರ್ದು = ಹುಲುಸಾಗಿ; ಮಂಜು = ಮೋಹರೂಪ ಮಾಯೆ; ಮಾಮರ = ಮನಸ್ಸು; ಹೂ ಮಿಡಿ ಫಲಂಗಳು = ವಿವಿಧ ವೈಷಯಿಕ ಅನುಭವಗಳು, ಭಾವನೆಗಳು ಮತ್ತು ಲಾಲಸೆಗಳು; Written by: Sri Siddeswara Swamiji, Vijayapura