Index   ವಚನ - 189    Search  
 
ಬೆಲ್ಲದ ಹೊಗೆಯನಿಕ್ಕಿ, ಭರಣಿಯ ಹೊರವಂತೆ ಇರಬೇಡವೆ ಗುರುವಿನುಪದೇಶ? ದಾರಿಯ ಹಸಮಾಡಿ ನೀರ ತಿದ್ದುವಂತೆ ಇರಬೇಡವೆ ಗುರುವಿನುಪದೇಶ? ಹಾಲುಂಬ ಹಸುಳೆಗೆ ಕೂಳು ಮೈಯಕ್ಕುವುದೆ? ಬುದ್ಧಿಹೀನರು ಬಲ್ಲರೆ ಪರಬ್ರಹ್ಮದ ಸುಖವ? ಈ ಭೇದವನರಿಯದ ಗುರುಶಿಷ್ಯರಿಬ್ಬರೂ ಇದ್ದ ಊರೊಳಗಿರೆನೆಂದನಂಬಿಗರ ಚೌಡಯ್ಯ.