•  
  •  
  •  
  •  
Index   ವಚನ - 393    Search  
 
ಸಕಲ ಭುವನಾದಿಭುವನಂಗಳಿಗೆ ತಂದೆ, ಸಕಲದೇವಾಧಿದೇವರ್ಕಳಿಗೆ ತಂದೆ. ಭವಭವದಲ್ಲಿ ನೀನೆನ್ನ ತಂದೆ. ಗುಹೇಶ್ವರಲಿಂಗ, ನಿರಾಳದಲ್ಲಿ ನೀನೆನ್ನ ತಂದೆ.
Transliteration Sakala bhuvanādibhuvanaṅgaḷige tande, sakaladēvādhidēvarkaḷige tande. Bhavabhavadalli nīnenna tande. Guhēśvaraliṅga, nirāḷadalli nīnenna tande.
Hindi Translation सकल भुवनादि भुवनों के पिता। सकल देवानुदेवों के पिता। भव भव में तुमही मेरे पिता। गुहेश्वर लिंग निराला स्थिति में तुम ही मेरे पिता! Translated by: Eswara Sharma M and Govindarao B N
Tamil Translation அனைத்து உலகங்களுக்கும் தந்தை அனைத்து தேவதேவதைகளுக்கும் தந்தை பிறவிதோறும் நீ என்னைத் தோற்றினை குஹேசுவரலிங்கமே, தூய நிலையில் நீ என்னை இருத்தினை. Translated by: Smt. Kalyani Venkataraman, Chennai
ಶಬ್ದಾರ್ಥಗಳು ಎನ್ನ = ಶರಣನಾದ ನನ್ನನ್ನು; ಎನ್ನ = ಶರಣನಾದ ನನ್ನನ್ನು; ತಂದೆ = ಪರಮಾತ್ಮನು ಒಡೆಯ, ಕರ್ತ, ರಕ್ಷಕ; ತಂದೆ = ಪ್ರೇರಕಪ್ರಭು; ತಂದೆ = (ಈ ಹಿಂದೆ) ಬರುವಂತೆ ಮಾಡಿದೆ; ತಂದೆ = ತಂದು ನಿಲ್ಲಿಸಿದೆ; ದೇವಾದಿದೇವರ್ಕಳಿಗೆ = ಎಲ್ಲ ಬಗೆಯ ದೇವದೇವತೆಗಳಿಗೆ; ನಿರಾಳದಲ್ಲಿ = ನಿಭಾರ್ವಸ್ಥಿತಿಯಲ್ಲಿ, ಲಿಂಗಭಿನ್ನವಾದ ಅನ್ಯಭಾವಗಳೇ ಇಲ್ಲದ ವಿಶುದ್ದ ಸ್ಥಿತಿಯಲ್ಲಿ; ನೀನು = ಪರಶಿವನಾದ ನೀನು; ಭವಭವದಲ್ಲಿ = ಜನ್ಮಜನ್ಮಗಳಲ್ಲಿ, ವಿವಿಧ ಜನ್ಮಗಳಲ್ಲಿ; ಭುವನಾದಿ = ಈ ಭುವನ ಮೊದಲು ಮಾಡಿ ಇರುವ; ಸಕಲ ಭುವನಂಗಳಿಗೆ = ಎಲ್ಲ ಭುವನಗಳಿಗೂ, ಲೋಕಂಗಳಿಗೂ; Written by: Sri Siddeswara Swamiji, Vijayapura