•  
  •  
  •  
  •  
Index   ವಚನ - 394    Search  
 
ಬಟ್ಟೆಗೊಂಡು ಹೋಗುತ್ತೊಂದ ಕೊಟ್ಟುಹೋದರೆಮ್ಮವರು. ಎಲ್ಲಿಯದು ಲಿಂಗ? ಎಲ್ಲಿಯದು ಜಂಗಮ? ಎಲ್ಲಿಯದು ಪಾದೋದಕ? ಪ್ರಸಾದವಯ್ಯಾ? ಅಲ್ಲದವರೊಡನಾಡಿ ಎಲ್ಲರೂ ಮುಂದುಗೆಟ್ಟರಯ್ಯಾ. ಆನು ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ.
Transliteration Baṭṭegoṇḍu hōguttonda koṭṭuhōdarem'mavaru. Elliyadu liṅga? Elliyadu jaṅgama? Elliyadu pādōdaka? Prasādavayyā? Alladavaroḍanāḍi ellarū mundugeṭṭarayyā. Ānu nim'ma nambi bayalāde guhēśvarā.
Hindi Translation जाते समय एक मार्ग देकर गये हमारे पूर्वज, कहाँ का लिंग, कहाँ का जंगम, कहाँ का पादोदक प्रसाद? अननुभवियों के संग से सभी गुमराह बन गये ; मैं तुम्हें मानकर तुम में मिला गुहेश्वरा। Translated by: Eswara Sharma M and Govindarao B N
Tamil Translation சிவவழியில் செல்லும்பொழுது எம்மவர் ஒன்றை அளித்து விட்டுச் சென்றனர் இலிங்கத்தை உணர்வரோ? ஜங்கமரைச் சார்வரோ? திருவடித் திருநீர் பிரசாதம் கிடைக்கப்பெறுவரோ? பற்றுளோரிடம் உறவாடி வழிதவறினர் நானும்மை நம்பி வயலானேன் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಲ್ಲದವರ = ಅನುಭಾವಿಗಳಲ್ಲದವರ, ನಿಜಸಾಧಕರಲ್ಲದವರ, ಭೋಗೋಪಭೋಗಗಳ ಒಲವುಳ್ಳವರ; ಆನು = ಶಿವಪಥಗಾಮಿಯಾದ ನಾನು; ಎಮ್ಮವರು = ಕರುಣಾಮೂರ್ತಿಗಳಾದ ಗುರುಗಳು; ಎಲ್ಲರೂ = ಸಾಧನಾವಿಮುಖರಾದ ಅವರೆಲ್ಲರೂ; ಒಂದ = ದೇವನತ್ತ ನಡೆಸುವ ಒಂದು ವಿಧಾನವನ್ನು; ಒಳನಾಡಿ = ಜೊತೆಗೂಡಿ; ಕೊಟ್ಟು = ಕರುಣಿಸಿ; ನಿಮ್ಮ ನಂಬಿ = ನಿಮ್ಮ ಸಾಕಾರರೂಪನಾದ ಗುರುವಿನಲ್ಲಿ ಶ್ರದ್ದೆಯಿರಿಸಿ; ಬಟ್ಟೆಗೊಂಡು = ದೇವಪಥವಿಡಿದು; ಬಯಲಾದೆ = ನಿಮ್ಮಲ್ಲಿ ಒಂದಾದೆ; ಮುಂದುಗೆಟ್ಟರು = ದಾರಿತಪ್ಪಿದರು, ಗುರಿಗೆಟ್ಟರು; ಹೋಗುತ್ತ = ಹೋಗುವಾಗ; ಹೋದರು = ಮುಂದೆ ನಡೆದುಹೋದರು, ದೂರಾದರು; Written by: Sri Siddeswara Swamiji, Vijayapura