ವಚನ - 395     
 
ಆದಿಯ ಶರಣನೊಬ್ಬನ ಮದುವೆಯ ಮಾಡಲು, ಯುಗ ಜುಗದವರೆಲ್ಲಾ ನಿಬ್ಬಣ ಹೋದರು, ಹೋದ ನಿಬ್ಬಣಿಗರು ಮರಳರು! ಮದುವಣಿಗನ ಸುದ್ದಿಯನರಿಯಲು ಬಾರದು. ಹಂದರವಳಿಯದು, ಹಸೆ ಮುನ್ನಲುಡುಗದು! ಬಂದಬಂದವರೆಲ್ಲಾ ಮಿಂದುಂಡು ಹೋದರು. ಇದರಂತುವನರಿಯದೆ ಜಗವೆಲ್ಲ ಬರಡಾಯಿತ್ತು ಇದರಂತುವನರಿದಡೆ ಗುಹೇಶ್ವರಶಬ್ದವನೊಳಕೊಂಡ ಮಹಂತ ಬಯಲು!