Index   ವಚನ - 267    Search  
 
ಹಾಡಿ ಹಾಡುವ ಹರಕೆಯ ಕೇಡು, ಕೂಡಿ ಮಾಡುವ ಕೂಡಿಕೆಯ ಕೇಡು, ಹಾಡಿ ಮಾಡಿ, ಕೂಡಿ ಮಾಡಿ ಬದುಕಿಗೆ ಕೇಡು ತಂದುಕೊಳ್ಳಲೇತಕೊ? ತನ್ನ ಬೇಡಲಿಕ್ಕೆ ಬಂದ ಜಂಗಮದ ಇರವನರಿತು, ನೀಡ ಕಲಿತರೆ ರೂಢಿಯೊಳಗೆ ಆತನೆ ಜಾಣನೆಂದಾತ ನಮ್ಮ ಅಂಬಿಗರ ಚೌಡಯ್ಯ.