ಬಾರದಿರು ಬ್ರಹ್ಮನ ಅಂಡದಲ್ಲಿ,
ಬೆಳೆಯದಿರು ವಿಷ್ಣುವಿನ ಕುಕ್ಷಿಯಲ್ಲಿ,
ಸಾಯದಿರು ರುದ್ರನ ಹೊಡೆಗಿಚ್ಚಿನಲ್ಲಿ.
ಹುಟ್ಟಿದ ಅಂಡವನೊಡೆ,ಬೆಳೆದ ಕುಕ್ಷಿಯ ಕುಕ್ಕು,
ಹೊಯ್ವ ಹೊಡೆಗಿಚ್ಚ ಕೆಡಿಸು.
ಮೂರುಬಟ್ಟೆಯ ಮುದಿಡು,
ಒಂದರಲ್ಲಿ ನಿಂದು ನೋಡು.
ಆ ಒಂದರಲ್ಲಿ ಸಂದಿಲ್ಲದ ಅಂಗವೇ ನೀನಾಗು
ಸದಾಶಿವಮೂರ್ತಿಲಿಂಗಕ್ಕೆ.
Art
Manuscript
Music
Courtesy:
Transliteration
Bāradiru brahmana aṇḍadalli,
beḷeyadiru viṣṇuvina kukṣiyalli,
sāyadiru rudrana hoḍegiccinalli.
Huṭṭida aṇḍavanoḍe,beḷeda kukṣiya kukku,
hoyva hoḍegicca keḍisu.
Mūrubaṭṭeya mudiḍu,
ondaralli nindu nōḍu.
Ā ondaralli sandillada aṅgavē nīnāgu
sadāśivamūrtiliṅgakke.