ಚಿತ್ತದಲ್ಲಿ ನೆನೆದ ಲೆಕ್ಕವ ಇದಿರಿಟ್ಟು ಬರೆದಲ್ಲದೆ ಅರಿಯಬಾರದು.
ಅರಿವು ಘನದಲ್ಲಿ ನಿಂದೆನೆಂದಡೆ
ದೃಷ್ಟವಾದ ಲಿಂಗದಲ್ಲಿ ನಿಂದಲ್ಲದೆ ಕಾಣಬಾರದು.
ಹೀಗಲ್ಲದೆ, ಆಧ್ಯಾತ್ಮದಲ್ಲಿ ಹೊದ್ದಿನೋಡಿ ಕಂಡೆನೆಂಬ
ಬದ್ಧರ ಮಾತ ಹೊದ್ದದಿರಬೇಕು,
ಸದಾಶಿವಮೂರ್ತಿಲಿಂಗವನರಿವುದಕ್ಕೆ.
Art
Manuscript
Music
Courtesy:
Transliteration
Cittadalli neneda lekkava idiriṭṭu baredallade ariyabāradu.
Arivu ghanadalli nindenendaḍe
dr̥ṣṭavāda liṅgadalli nindallade kāṇabāradu.
Hīgallade, ādhyātmadalli hoddinōḍi kaṇḍenemba
bad'dhara māta hoddadirabēku,
sadāśivamūrtiliṅgavanarivudakke.