ಉಂಟು ಇಲ್ಲಾ ಎಂಬುದನರಿತು
ನುಡಿವುದು ಕ್ರೀಯೊ? ನಿಃಕ್ರೀಯೊ?
ಇವೆಲ್ಲವನರಿತು ನುಡಿವುದು ಘಟದೊಳಗಳ ಮಾತಲ್ಲದೆ
ಅದು ಮಾಯಾವಾದದ ಇರವು.
ಭಾವ ಕಾಯವಲ್ಲಿ ಸಿಕ್ಕಿ ಸಕಲವನೊಡಗೂಡಿ ಭೋಗಂಗಳನುಣುತ
ನಾನಲ್ಲ ಎಂಬ ಮಾಯಾವಾದಿಗಳ ಮಾತು,
ಕನ್ನದ ಬಾಯಲ್ಲಿ ಸಿಕ್ಕಿದ ಕಳ್ಳನ ಬಾಯಾಲಿನಂತೆ
ಬಲ್ಲವರು ಮೆಚ್ಚುವರೆ?
ಶರೀರವುಳ್ಳನ್ನಕ್ಕ ಇಷ್ಟಪ್ರಾಣ ಮುಕ್ತನಾಗಬೇಕು.
ಇದೆ ನಿಶ್ಚಯ, ಸದಾಶಿವಮೂರ್ತಿಲಿಂಗವನರಿವುದಕ್ಕೆ.
Art
Manuscript
Music
Courtesy:
Transliteration
Uṇṭu illā embudanaritu
nuḍivudu krīyo? Niḥkrīyo?
Ivellavanaritu nuḍivudu ghaṭadoḷagaḷa mātallade
adu māyāvādada iravu.
Bhāva kāyavalli sikki sakalavanoḍagūḍi bhōgaṅgaḷanuṇuta
nānalla emba māyāvādigaḷa mātu,
kannada bāyalli sikkida kaḷḷana bāyālinante
ballavaru meccuvare?
Śarīravuḷḷannakka iṣṭaprāṇa muktanāgabēku.
Ide niścaya, sadāśivamūrtiliṅgavanarivudakke.