ಗುರುಚರಪರದ ಇರವು ಹೇಗಿರಬೇಕೆಂದಡೆ:
ಉರಿಯನೊಳಕೊಂಡ ಕಲ್ಲಿನಂತಿರಬೇಕು,
ತೈಲವನೊಳಕೊಂಡ ತಿಲದಂತಿರಬೇಕು,
ದ್ರವವನೊಳಕೊಂಡ ಅರಗಿನಂತಿರಬೇಕು,
ಬಯಲನೊಳಕೊಂಡ ಕರ್ಪುರದಂತಿರಬೇಕು.
ನೋಡಿದಡಂಗವಾಗಿ, ಮಥನಕ್ಕೆ ಬಯಲಾಗಿ
ತೋರುತ್ತಿಹ ಮೂರ್ತಿ ತಾನೆ,
ನಿರಂಗ ಸದಾಶಿವಮೂರ್ತಿಲಿಂಗವು ತಾನೆ.
Art
Manuscript
Music
Courtesy:
Transliteration
Gurucaraparada iravu hēgirabēkendaḍe:
Uriyanoḷakoṇḍa kallinantirabēku,
tailavanoḷakoṇḍa tiladantirabēku,
dravavanoḷakoṇḍa araginantirabēku,
bayalanoḷakoṇḍa karpuradantirabēku.
Nōḍidaḍaṅgavāgi, mathanakke bayalāgi
tōruttiha mūrti tāne,
niraṅga sadāśivamūrtiliṅgavu tāne.