Index   ವಚನ - 66    Search  
 
ತನ್ನ ಕುರಿತು ಪರಿಹರವ ಮಾಡಿಕೊಂಬಲ್ಲಿ ಅನ್ಯರ ಗುಣದೋಷವ ಸಂಪಾದಿಸಲಿಲ್ಲ. ಅದು ಒಡೆದ ಠಾವಿನಲ್ಲಿ ಒಸರುವುದಲ್ಲದೆ ಬೇರೊಂದೆಡೆಯಲ್ಲಿಲ್ಲ. ಇದು ಕಾರಣ, ಉಭಯವ ಅಲ್ಲ-ಅಹುದೆಂದೆನಲಿಲ್ಲ. ಸದ್ಭಕ್ತ ಮಾಡುವ ಸನ್ನದ್ಧ ಭಕ್ತಿ ಸದಾಶಿವಮೂರ್ತಿಲಿಂಗದ ಕೈಲೆಡೆಯ ಪ್ರಾಣ.