ಸಹಭೋಜನ ಮಾಡುವ ಸಾಧನೆವಂತರು ಕೇಳಿರೊ:
ಲಿಂಗ ಕರ್ತೃವಾಗಿ ನೀ ಭೃತ್ಯನಾಗಿದ್ದಲ್ಲಿ
ಲಿಂಗ ಅಮಲ, ನೀ ಮಲದೇಹಿ,
ನಿನಗೆ ಪ್ರಪಂಚು, ಲಿಂಗವು ನಿಃಪ್ರಪಂಚು,
ನೀ ಅಂಗ, ಲಿಂಗವು ನಿರಂಗ.
ಲಿಂಗಕ್ಕೂ ನಿನಗೂ ಸಹಭೋಜನವೆಂತುಟಯ್ಯಾ?
ಜಾಗ್ರದಲ್ಲಿ ತೋರಿ, ಸ್ವಪ್ನದಲ್ಲಿ ಕಂಡುದ
ಲಿಂಗಕ್ಕೆ ಸಹಭೋಜನವ ಮಾಡುವ ಪರಿಯಿನ್ನೆಂತೊ?
ಸಾಕು ಕುಟಿಲದ ಊಟ,
ಸದಾಶಿವಮೂರ್ತಿಲಿಂಗವು ಮುಟ್ಟದ ಅರ್ಪಿತ.
Art
Manuscript
Music
Courtesy:
Transliteration
Sahabhōjana māḍuva sādhanevantaru kēḷiro:
Liṅga kartr̥vāgi nī bhr̥tyanāgiddalli
liṅga amala, nī maladēhi,
ninage prapan̄cu, liṅgavu niḥprapan̄cu,
nī aṅga, liṅgavu niraṅga.
Liṅgakkū ninagū sahabhōjanaventuṭayyā?
Jāgradalli tōri, svapnadalli kaṇḍuda
liṅgakke sahabhōjanava māḍuva pariyinnento?
Sāku kuṭilada ūṭa,
sadāśivamūrtiliṅgavu muṭṭada arpita.