Index   ವಚನ - 86    Search  
 
ಭಕ್ತಂಗೆ ಕ್ರೀ, ಜಂಗಮಕ್ಕೆ ನಿಃಕ್ರೀಯೆಂದೆನಬಾರದು. ಜಂಗಮಕ್ಕೆ ಸದ್ಭಕ್ತಿ, ಸದಾಚಾರ, ಸಕ್ರೀ ಇಂತೀ ಆಚಾರದಲ್ಲಿ ಇರಬೇಕು. ಅದೆಂತೆಂದಡೆ: ಪುರುಷನ ಆಚಾರ ಸತಿಗೆ ಕಟ್ಟು, ಜಂಗಮದ ಆಚಾರ ಭಕ್ತಂಗೆ ಸಂಪದದ ಬೆಳೆ. ಅವತಾರಕ್ಕೆ ವೇಷ, ಅರಿವಿಂಗೆ ಆಚಾರ. ಆ ಜಂಗಮಭಕ್ತನ ಇರವು ಘಟಪ್ರಾಣದಂತೆ. ಸದಾಶಿವಮೂರ್ತಿಲಿಂಗವು ತಾನೆ.