ಧರೆಯ ಹಾವು ಆಕಾಶದೊಳಗಳ
ಕಪ್ಪೆ ಒಳಗೂಡಿ ಒರುಮೆಯಾಗಿ,
ಹಾವು ಗಾರುಡನ ನುಂಗಿ,
ಕಪ್ಪೆ ಹಿಡಿವ ಜೋಗಿಯ ನುಂಗಿ,
ಮತ್ತೆ ಕಪ್ಪೆಗೆ ಸರ್ಪಗೆ ವಿರೋಧವಾಗಿ,
ಕಪ್ಪೆ ಜೋಗಿಯನುಗುಳಿ, ಸರ್ಪನ ನುಂಗಿತ್ತು.
ಕಪ್ಪೆಯ ವಿಷ ತಾಗಿ ಜೋಗಿ ಮತ್ತನಾದ.
ಇಂತೀ ಭೇದದಿಂದ ಅರಿವು ತಾನೆ;
ಸದಾಶಿವಮೂರ್ತಿಲಿಂಗವು ತಾನು ತಾನೆ.
Art
Manuscript
Music
Courtesy:
Transliteration
Dhareya hāvu ākāśadoḷagaḷa
kappe oḷagūḍi orumeyāgi,
hāvu gāruḍana nuṅgi,
kappe hiḍiva jōgiya nuṅgi,
matte kappege sarpage virōdhavāgi,
kappe jōgiyanuguḷi, sarpana nuṅgittu.
Kappeya viṣa tāgi jōgi mattanāda.
Intī bhēdadinda arivu tāne;
sadāśivamūrtiliṅgavu tānu tāne.